2/3/08

ಏನ್ ಗುರು | ಬನವಾಸಿ ಬಳಗ | EN GURU | BANAVASI BALAGA: ಕರ್ನಾಟದ�

ಏನ್ ಗುರು ಬನವಾಸಿ ಬಳಗ EN GURU BANAVASI BALAGA: ಕರ್ನಾಟದ�

This Blog
This Blog





31.1.08

ಕರ್ನಾಟದಾಗ್ ಇದ್ ಮ್ಯಾಲೆ ಕನ್ನಡ ಕಲೀರಿ ಅಂದೋರ್ ಯಾರ್ ಗೊತ್ತೇನು?
"ಹೊರಗಿನ್ ರಾಜ್ಯದಿಂದ ಬಂದ ಮಂದಿ ಕನ್ನಡ ನೆಲದಾಗ್ ಬದುಕಬೇಕ್ ಅಂದ್ರ ಲಗೂನ ಕನ್ನಡ ಕಲೀರಿ"ಈ ಮಾತ್ ಅಂದವ್ರು ಯಾರೋ ಕನ್ನಡ ಚಳವಳಿ ಮಂದಿ ಅಲ್ರಿ, ಬದಲಿಗೆ ನಮ್ಮ ಬೆಂಗಳೂರಾಗಿರೋ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಕೇರಳ ಮೂಲದ ಶ್ರೀ ಸಿರಿಯಾಕ್ ಜೋಸೆಫ್ ಅವರ ನೋಡ್ರಿ. ಮುಖ್ಯ ನ್ಯಾಯಮೂರ್ತಿಗಳು ಅವರ ಘನತೆಗ ತಕ್ಕಂತ ಛಲೋ ಮಾತ್ ಹೇಳ್ಯಾರ್ ಅನ್ನೋದು ಖೀರ್ ಕುಡ್ದಂಗ್ ಆಗೈತ್ ನೋಡ್ರಿ.’ರೋಮ್’ನಾಗ ರೋಮನ್ ಆಗಿರು: ಕನ್ನಡ ಬರೂಣಿಲ್ಲ ಅಂತಂದ ದಿಲ್ಲಿ ಮೂಲದ ಒಬ್ಬ ವಕೀಲಗ ಚಲೋತ್ನಾಗ ನೀರ್ ಇಳಸ್ಯಾರ್ ರೀ. ಅವಗ ನಮ್ಮ ನ್ಯಾಯ ಮೂರ್ತಿಗಳು " ಕರ್ನಾಟಕದಾಗ ವಾಸಿಸಬೇಕು ಅಂತ ಯಾರರ ಬರಲಿ, ಅವರು ಕನ್ನಡ ಕಲೀಲೇಬೇಕು. ಕರ್ನಾಟಕದಾಗ್ ಇರ್ತೇನಿ, ಆದ್ರ ಕನ್ನಡ ಮಾತ್ರ ಬ್ಯಾಡ ಅಂದ್ರ ಹ್ಯಾಂಗಪಾ ತಮ್ಮ " ಅಂತ ಕೇಳ್ಯಾರ್ ನೋಡ್ರಿ. ಬಾಳ ಖುಷಿ ಆಗಿದ್ದ ಯಾಕಂದ್ರ ನ್ಯಾಯಮೂರ್ತಿಗಳು ಮೂಲ ಕೇರಳದವರು. ಇಲ್ಲಿಗೆ ಬಂದ ಮ್ಯಾಲ ಇಲ್ಲಿ ಮಂದಿ ಭಾವನೆಗಳಿಗ ಬೆಲಿ ಕೊಟ್ಟು ತುಸಾ ಕನ್ನಡ ಕಲತೇನಿ ಅಂತ ಎದಿ ತಟ್ಟಿ ಹೇಳಕೊಂಡಾರ್ ನೋಡ್ರಿ. ರೋಮ್ ನಾಗ್ ರೋಮನ್ ಆಗಿರು ಅನ್ನು ಬೀಜ ಮಾತು ನಮ್ಮ ಸಾಹೇಬ್ರು ಎಷ್ಟು ಚಂದ ಅರ್ಥ ಮಾಡ್ಕೊಂಡು ತಮ್ಮ ಜೀವನದಾಗ್ ಅಳವಡಿಸಿ ಕೊಂಡಾರಲ್ಲಾ ಅಂತ ಅವರಿಗೆ ನಮ್ಮ ಮನಸ್ಸಿಲೆ ಅಭಿನಂದನೆ ಹೇಳೋಣು.ಅಲ್ರಿ ಯಾರಾನಾ ಎದಕ ಕನ್ನಡ ಕಲಿಬೇಕು, ಅಂತ ದೊಡ್ಡ ಫಾಯ್ದೆ ಏನ್ ಐತಿ?ಒಂದು ಪ್ರದೇಶದಾಗಿನ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಬೆಳವಣಿಗಿ, ಆಡಳಿತ, ಶಿಕ್ಷಣ, ಕಾನೂನು ಸುವ್ಯವಸ್ಥೆ, ಸುಧಾರಣಿ ಮತ್ತು ಒಗ್ಗಟ್ಟಿಗೆ ಅಲ್ಲಿನ ಭಾಷಿ ಮತ್ತ ಸಂಸ್ಕೃತಿ ಉತ್ತಮವಾದ ವಾಹಕ ಆಗೇತ್ರಿ . ಹಿಂಗಾಗಿ ವಲಸಿಗರು ತಾವು ನೆಲಸು ಪ್ರದೇಶದ ಭಾಷಿ ಮತ್ತು ಸಂಸ್ಕೃತಿಗೆ ಸಹಮತ ತೋರಸುದು ವಲಸಿಗನ ಕರ್ತವ್ಯ ಆಕ್ಕೈತಿ. ಆಯಾ ಪ್ರದೇಶದ ಏಳಿಗೆಗೆ ಬಹುಮುಖ್ಯವಾಗಿ ಬೇಕಾದ ಒಗ್ಗಟ್ಟನ್ನು ಒದಗಿಸತೆತಿ. ವಲಸಿ ಬಂದವನಿಗೆ ಇದು ಸ್ಥಳೀಯನ ಸ್ನೇಹದ ಜತೆಗೆ, ಅಲ್ಲಿರುವ ಅವಕಾಶ, ತನ್ನನ್ನು ತೊಡಗಿಸಿಕೊಳ್ಳುವ ಸಾಮರ್ಥ್ಯಕ್ಕೆ ಸಾಣಿ ಹಿಡೀತೈತಿ. ತಾನು ಈ ಊರಾಗ ಒಬ್ಬಂಟಿಯಲ್ಲ, ಮಂದಿ ಕೂಡ ಒಬ್ಬ ಅನ್ನೂ ಹೆಮ್ಮಿ ಕೂಡಾ ಅವ ಬೆಳೀಲಿಕ್ಕೂ ಅನುಕೂಲ ಮಾಡಿಕೊಡ್ತೈತಿ. ಇದು ವಲಸಿಗನಿಗೂ ಚಲೋ, ನಮಗೂ ಚಲೋ.ಕನ್ನಡ ಕಲಿತೆನಿ ಅನ್ನೋರಿಗೆ ಬೆಂಬಲ ಕೊಡಬೇಕ್ರಿಪಾ!"ಏ ಇವನಾಪ್ನ ಇವನ ಬಾಯಾಗ ಕನ್ನಡ ಪೂರಾ ಕೊಲೆ ಆಗತೇತಿ", " ಅಣ್ಣ, ಹೋಗಲಿ ಬಿಡಪಾ, ಯಾಕ ಸುಳ್ಳ ತ್ರಾಸ್ ತಗೋತಿ, ನಾನೇ ನಿಮ್ ಭಾಷಾದಾಗ್ ಮಾತಾಡತೇನಿ" ಅಂತ ಅಂದು ಕನ್ನಡ ಮಾತಾಡಾಕ್ ಪ್ರಯತ್ನ ಮಾಡೋರ ಉತ್ಸಾಹಕ್ಕ ತಣ್ಣೀರು ಹಾಕಬ್ಯಾಡ್ರಿ. ಕನ್ನಡ ಕಲಿಯೋ ನಿರ್ಧಾರ ತಗೊಂಡು ಇಲ್ಲಿನ ಮುಖ್ಯವಾಹಿನಿಯಾಗ್ ಬೆರೆಯಾಕ್ ಒಲವು ತೋರುಸ್ತಿರೋ ವಲಸಿಗರಿಗೆ ಬೆನ್ನು ತಟ್ಟಿ "ಹೌದಲ್ಲೇ ಮಗನ " ಅಂತ ಹುರಿದುಂಬಿಸಬೇಕು ಗುರು!ನೀವು ಕೆಲ್ಸ ಮಾಡು ಕಡೆ ಕನ್ನಡ ಕಲಿಸು ಅವಕಾಶ ಸಿಕ್ರ ತಪ್ಪದ ಅದರ ಉಪಯೋಗ ತಗೋರಿ. ಕನ್ನಡ ಬಾರದ ನಿಮ್ಮ ಸ್ನೇಹಿತರಿಗ ಕನ್ನಡ ಕಲಿಯುದ್ರಿಂದ ಆಗು ಫಾಯ್ದೆ ಬಗ್ಗ ತಿಳಿ ಹೇಳ್ರಿ ಗುರುಗಳಾ.

No comments: