5/6/08

.: Kannada Mitra :.

.: Kannada Mitra :.
ಸಾಮಾನ್ಯವಾಗಿ ಮಾಹಿತಿ ತಂತ್ರಜ್ಞಾನ ಹಾಗು ಇನ್ನಿತರ ಉನ್ನತ ಕ್ಷೇತ್ರಗಳ ಸಂಸ್ಥೆಗಳಲ್ಲಿ ಬಹಳಷ್ಟು ಕನ್ನಡಿಗರು ಕಾಣಸಿಗುವುದಿಲ್ಲ. ಇದಕ್ಕೆ ಪ್ರಮುಖ ಕಾರಣಗಳು:

ಹೆಚ್ಚಾಗಿ, ಪದವೀಧರ ಕನ್ನಡಿಗರಲ್ಲಿ ಆಂಗ್ಲ ಭಾಷೆಯ ಉಪಯೋಗದ ಹಿಂಜರಿತ ಮತ್ತು ಅದರಿಂದ ಉಂಟಾಗಬಹುದಾದ ಸಂವಹನದ ಕೊರತೆಯನ್ನೇ ಮುಖ್ಯ ಕಾರಣವಾಗಿರಿಸಿ, ಬೇರೆ ಭಾಗದ ಜನರನ್ನೇ ಸಂಸ್ಥೆಗಳು ಉದ್ಯೋಗಕ್ಕಾಗಿ ತೆಗೆದುಕೊಳ್ಳುತ್ತಿರುವುದು ಮತ್ತು ಸಂಸ್ಥೆಯ ಅಧಿಕಾರಿಗಳು ತಮ್ಮ ಭಾಗದ ಜನರನ್ನು ನೇಮಕ ಮಾಡಿಕೊಳ್ಳುವುದು.
ಎಷ್ಟೋ ಸಂದರ್ಭಗಳಲ್ಲಿ ಸಂಸ್ಥೆಗಳು, ತಮ್ಮ ಉದ್ಯೊಗಿಗಳ ಮೂಲಕವೇ, ಹೊಸಬರನ್ನು ತೆಗೆದುಕೊಳ್ಳುವುದರಿಂದ (Walk ins) ಸಂಸ್ಥೆಯ ಹೊರಗೆ ಇರುವ ಕನ್ನಡಿಗರಿಗೆ, ಸ್ಪರ್ಧಿಸುವ ಅವಕಾಶವು ತಪ್ಪಿದಂತೆ ಆಗುತ್ತದೆ.
ಕೇಂದ್ರ ಸರಕಾರದ ಖಾಲಿ ಇರುವ ಎಷ್ಟೋ ಸ್ಥಾನಗಳ ಭರ್ತಿಗಾಗಿ, ಬರುವ ಜಾಹಿರಾತುಗಳು ಕನ್ನಡಿಗರನ್ನು ತಲುಪುವುದಿಲ್ಲ, ಹಾಗೂ ಅವುಗಳು ಒಂದೇ ಸ್ಥಳದಲ್ಲಿ ಲಭ್ಯವಾಗದೆ ಇರುವುದರಿಂದ ಬಹುಪಾಲು ಕನ್ನಡಿಗರಿಗೆ ಅರ್ಜಿ ಹಾಕುವ ಅವಕಾಶವೇ ತಪ್ಪುತ್ತದೆ.
ಮೇಲಿನ ಕೆಲವು ಸಮಸ್ಯೆಗಳ ಪರಿಹಾರಕ್ಕೆ ಇಲ್ಲಿ ಸಿಗುವ ಸೌಲಭ್ಯಗಳು:

ಆಂಗ್ಲ ಭಾಷೆಯಲ್ಲಿ ಸುಲಲಿತವಾಗಿ ಮಾತನಾಡಲು ಸಹಕರಿಸುವ ಉಚಿತ ಧ್ವನಿ ಮುದ್ರಣ ಮತ್ತು ಭಾಷೆಗೆ ಸಂಬಂಧಿತ ಮಾಹಿತಿಗಳು.
ಸ್ಥಳಕ್ಕನುಗುಣವಾಗಿ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ.

No comments: